ಸುಡಾನ್: ಮಸೀದಿಯಲ್ಲಿ ಗುಂಡುಹಾರಾಟ ಎಂಟು ಮಂದಿ ದಾರುಣ ಹತ್ಯೆ!
ಖರ್ತೂಂ,ಮೇ 24: ಸುಡಾನ್ನ ಮುಸ್ಲಿಂ ಮಸೀದಿಯಯಲ್ಲಿ ನಡೆದ ಗುಂಡುಹಾರಾಟದಲ್ಲಿ ಎಂಟು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಪೂರ್ವ ಸೂಡಾನ್ನ ಧಾರ್ಫರ್ನಲ್ಲಿ ಘಟನೆನಡೆದಿದೆ.
ಶಸ್ತ್ರಾಸ್ತ್ರಗಳೊಂದಿಗೆ ಬಂದ ಯುವಕರು ಮಸೀದಿಯೊಳಗೆ ನುಗ್ಗಿ ಯದ್ವಾ ತದ್ವಾ ಗುಂಡು ಹಾರಾಟ ನಡೆಸಿದರು. ಆಕ್ರಮಣದಲ್ಲಿ ಹಲವಾರು ಮಂದಿಗೆ ಗಾಯಗಳಾಗಿವೆ. ಸುಡಾನ್ ಸರಕಾರ ದೇಶದ ರಾಜಧಾನಿ ಸಹಿತ ಸೇನೆಯನ್ನು ವಿನ್ಯಾಸಗೊಳಿಸಿ ಭದ್ರತೆಯನ್ನು ಹೆಚ್ಚಿಸಿದೆ. ಸುಡಾನ್ನ ಗೋತ್ರವರ್ಗಗಳು ಪರಸ್ಪರ ದಾಳಿನಡೆಸುವ ಸ್ಥಳ ಧಾರ್ಫರ್ ಆಗಿದೆ.
ಜನಾಂಗೀಯ ವಿದ್ವೇಶದ ಹೆಸರಿನಲ್ಲಿ ಗುಂಡುಹಾರಾಟ ನಡೆದಿದೆ ಎಂದು ಅಂದಾಜಿಸಲಾಗಿದೆ. ಘಟನೆ ಕಳೆದು ಗಂಟೆಗಳು ಕಳೆದರೂ ಸುಡಾನ್ ಸರಕಾರ ಅಧಿಕೃತ ಹೇಳಿಕೆ ನೀಡಿಲ್ಲ. ಭದ್ರತಾ ವ್ಯವಸ್ಥೆಯ ವೈಫಲ್ಯದಿಂದಾಗಿ ದೇಶದಲ್ಲಿ ಆಯುಧಗಳು ಅನಿಯಂತ್ರಿತವಾಗಿ ಲಭಿಸುತ್ತಿರುವುದು ಇಂತಹ ದುರ್ಘಟನೆಗಳಿಗೆ ಕಾರಣವೆನ್ನಲಾಗುತ್ತಿದೆ.
Next Story