ಫ್ರಾನ್ಸ್: ವಿಮಾನವಾಹಕ ಯುದ್ಧನೌಕೆಯ 700 ನಾವಿಕರಿಗೆ ಕೊರೋನ ಸೋಂಕು
ಪ್ಯಾರಿಸ್ (ಫ್ರಾನ್ಸ್), ಎ. 16: ಫ್ರಾನ್ಸ್ನ ವಿಮಾನವಾಹಕ ಯುದ್ಧನೌಕೆ ‘ಚಾರ್ಲ್ಸ್ ಡಿ ಗಾಲ್ನಲ್ಲಿರುವ ಸುಮಾರು 700 ನಾವಿಕರು ಕೊರೋನವೈರಸ್ ಸೋಂಕಿಗೆ ಗುರಿಯಾಗಿದ್ದಾರೆ ಎಂದು ದೇಶದ ಸಶಸ್ತ್ರ ಪಡೆಗಳ ಸಚಿವಾಲಯ ಬುಧವಾರ ತಿಳಿಸಿದೆ.
1,767 ನೌಕಾ ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಕನಿಷ್ಠ 668 ಮಂದಿಯಲ್ಲಿ ನೂತನ-ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ ಎಂದು ಅದು ಹೇಳಿದೆ.
‘‘31 ಸಿಬ್ಬಂದಿ ಇಂದು ಆಸ್ಪತ್ರೆಯಲ್ಲಿದ್ದಾರೆ ಹಾಗೂ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ’’ ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಯುದ್ಧನೌಕೆಯು ಇತ್ತೀಚಿನವರೆಗೂ ಬಾಲ್ಟಿಕ್ ಸಮುದ್ರದಲ್ಲಿ ಉತ್ತರ ಯುರೋಪಿಯನ್ ದೇಶಗಳ ನೌಕಾಪಡೆಗಳೊಂದಿಗೆ ಯುದ್ಧಾಭ್ಯಾಸದಲ್ಲಿ ತೊಡಗಿತ್ತು. ಸುಮಾರು 40 ಸಿಬ್ಬಂದಿ ಕೋವಿಡ್-19 ರೋಗದ ಲಕ್ಷಣಗಳನ್ನು ತೋರಿಸಿದ ಬಳಿಕ ಅದು ಎರಡು ವಾರಗಳ ಮುಂಚೆಯೇ ತವರಿಗೆ ಹಿಂದಿರುಗಿದೆ.
Next Story