ಫ್ರಾನ್ಸ್: ಕೊರೋನಗೆ ಬಲಿಯಾದವರ ಸಂಖ್ಯೆ 17,167
ಪ್ಯಾರಿಸ್, ಎ. 16: ಫ್ರಾನ್ಸ್ನ ಆಸ್ಪತ್ರೆಗಳು ಮತ್ತು ಆರೈಕೆ ಮನೆಗಳಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಸತ್ತವರ ಒಟ್ಟು ಸಂಖ್ಯೆ 17,167ನ್ನು ತಲುಪಿದೆ ಎಂದು ದೇಶದ ಉನ್ನತ ಆರೋಗ್ಯ ಅಧಿಕಾರಿ ಜೆರೋಮ್ ಸೋಲೋಮನ್ ಬುಧವಾರ ತಿಳಿಸಿದ್ದಾರೆ.
ಅದೇ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಕೊರೋನವೈರಸ್ಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಅವರು ಹೇಳಿದರು. ‘‘ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ತುಂಬಾ ಅಧಿಕವಾಗಿದೆ. ಆದರೆ ಮೊದಲ ಬಾರಿಗೆ ಈ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. ಜನರು ಗುಣಮುಖರಾಗಿ ಮನೆಗೆ ಮರಳುತ್ತಿದ್ದಾರೆ’’ ಎಂದು ಅವರು ನುಡಿದರು.
ಫ್ರಾನ್ಸ್ನಲ್ಲಿ ಮಾರ್ಚ್ 17ರಿಂದ ಬೀಗಮುದ್ರೆ ಜಾರಿಯಲ್ಲಿದೆ. ದೇಶದಲ್ಲಿ ಚಲನವಲನದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಮೇ 11ರ ನಂತರವಷ್ಟೇ ಸಡಿಲಿಸಬಹುದಾಗಿದೆ ಎಂದು ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ.
Next Story