ಆಟಿಕೆ ಬೈಕ್ ನಲ್ಲಿ ಬಂದು ಹೆಣ್ಣು ಮಗುವನ್ನು ಎಳೆದುಕೊಂಡು ಹೋದ ಕೋತಿ: ಆಘಾತಕಾರಿ ವಿಡಿಯೋ ವೈರಲ್
ಹೊಸದಿಲ್ಲಿ: ಆಟಿಕೆ ಬೈಕ್ ಸವಾರಿ ಮಾಡುತ್ತಾ ಬಂದ ಕೋತಿಯೊಂದು ಎಲ್ಲರೂ ನೋಡನೋಡುತ್ತಿದ್ದಂತೆಯೇ ಹೆಣ್ಣು ಮಗುವನ್ನು ಬೀಳಿಸಿ, ಸ್ವಲ್ಪ ದೂರದವರೆಗೆ ಮಗುವನ್ನು ರಸ್ತೆಯಲ್ಲಿಯೇ ಎಳೆದುಕೊಂಡು ಹೋದ ಆಘಾತಕಾರಿ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೋತಿ ಬೈಕ್ ನಲ್ಲಿ ಬರುತ್ತಿದ್ದ ಸಂದರ್ಭ ಆ ಮಗು ಅಲ್ಲಿಯೇ ಬೆಂಚೊಂದರಲ್ಲಿ ಕುಳಿತಿದ್ದಳು. ಆಕೆಯ ಹತ್ತಿರಕ್ಕೆ ಬರುತ್ತಿದ್ದಂತೆಯೇ ಕೋತಿ ಬೈಕಿನಿಂದ ಜಿಗಿದು ಆಕೆಯನ್ನು ಬೀಳಿಸಿ ಆಕೆಯ ಅಂಗಿಯನ್ನು ಕೈಯ್ಯಲ್ಲಿ ಹಿಡಿದು ಎಳೆಯುತ್ತಾ ರಸ್ತೆಯಲ್ಲಿ ಸಾಗುತ್ತದೆ. ಕೋತಿ ಆ ಮಗುವನ್ನು ಎಳೆಯುತ್ತಿದ್ದಂತೆಯೇ ಕೋತಿಯ ಕುತ್ತಿಗೆಯಲ್ಲಿದ್ದ ಸರಪಳಿಯಿಂದ ಯಾರೋ ಹಿಂದಕ್ಕೆ ಎಳೆಯುತ್ತಿರುವಂತೆ ಭಾಸವಾಗುತ್ತದೆ. ಅಂತಿಮವಾಗಿ ಕೋತಿ ಆ ಮಗುವನ್ನು ತನ್ನ ಹಿಡಿತದಿಂದ ಬಿಡುತ್ತದೆ.
ಈ ವೀಡಿಯೋವನ್ನು ಅಮೆರಿಕಾದ ಮಾಜಿ ಬಾಸ್ಕೆಟ್ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಅವರು ಶೇರ್ ಮಾಡಿದ್ದಾರೆ. ``ಕೋತಿಯೊಂದು ಮೋಟಾರ್ ಸೈಕಲ್ ಸವಾರಿ ಮಾಡಿ ಮಗವನ್ನು ಅಪಹರಿಸಲು ಯತ್ನಿಸುವ ಘಟನೆ '' ಎಂದು ಅವರು ಟ್ವಿಟ್ಟರ್ನಲ್ಲಿ ಬರೆದಿದ್ದಾರೆ.
Ini pasti monyetnya tukang ribut di sekolah pic.twitter.com/niitXnmvwZ
— ptr (@peteerh) May 3, 2020