ರಶ್ಯ: ಸೇನಾ ಹೆಲಿಕಾಪ್ಟರ್ ಪತನ; 4 ಸಾವು
ಸಾಂದರ್ಭಿಕ ಚಿತ್ರ
ಮಾಸ್ಕೋ (ರಶ್ಯ), ಮೇ 26: ಪೂರ್ವ ರಶ್ಯದ ದುರ್ಗಮ ಚುಕೋಟ್ಕ ವಲಯದಲ್ಲಿನ ವಿಮಾನ ನಿಲ್ದಾಣವೊಂದರಲ್ಲಿ ಮಂಗಳವಾರ ಸೇನಾ ಹೆಲಿಕಾಪ್ಟರೊಂದು ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲ ನಾಲ್ವರು ಮೃತಪಟ್ಟಿದ್ದಾರೆ ಎಂದು ವಲಯದ ಗವರ್ನರ್ ರೋಮನ್ ಕೋಪಿನ್ ಹೇಳಿದ್ದಾರೆ.
ಅನಡೈರ್ ಸಮೀಪದ ಚುಕೋಟ್ಕದಲ್ಲಿರುವ ಪ್ರಧಾನ ವಿಮಾನ ನಿಲ್ದಾಣದಲ್ಲಿ ರಶ್ಯದ ರಕ್ಷಣಾ ಇಲಾಖೆಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡಿತು ಎಂದು ತನ್ನ ಇನ್ಸ್ಟಾಗ್ರಾಂ ಪುಟದಲ್ಲಿ ರೋಮನ್ ಕೋಪಿನ್ ಬರೆದಿದ್ದಾರೆ.
ಹೆಲಿಕಾಪ್ಟರ್ನಲ್ಲಿ ಮೂವರು ಸಿಬ್ಬಂದಿ ಮತ್ತು ಓರ್ವ ತಾಂತ್ರಿಕ ಸಿಬ್ಬಂದಿ ಇದ್ದರು. ಎಲ್ಲ ನಾಲ್ವರು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಂಐ-8 ಹೆಲಿಕಾಪ್ಟರ್ ತಾಂತ್ರಿಕ ನಿರ್ವಹಣೆಗೆ ಒಳಗಾದ ಬಳಿಕ ಪರೀಕ್ಷಾ ಹಾರಾಟ ನಡೆಸುತ್ತಿತ್ತು ಎಂದು ರಶ್ಯದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
Next Story