ಪಾಕ್: ಮದ್ರಸ ಕಟ್ಟಡ ಕುಸಿದು ಆರು ಮಕ್ಕಳು ಮೃತ್ಯು
ಪೇಶಾವರ,ಜೂ.3: ಪಾಕಿಸ್ತಾನದ ಉತ್ತರ ವಝೀರ್ಸ್ತಾನ ಬುಡಕಟ್ಟು ಜಿಲ್ಲೆಯಲ್ಲಿ ಮದ್ರಸ ಕಟ್ಟಡವೊಂದರ ಮಹಡಿ ಕುಸಿದು ಕನಿಷ್ಠ ಆರು ಮಕ್ಕಳು ಮೃತಪಟ್ಟಿದ್ದು, ಇತರ 10 ಮಂದಿಗೆ ಗಾಯಗಳಾಗಿವೆ.
ಝೆರ್ ಜಾನ್ ಕೊಟ್ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ದುರಂತ ನಡೆದ ಸಂದರ್ಭದಲ್ಲಿ ಮಕ್ಕಳೆಲ್ಲರೂ ತರಗತಿಯ ಕೊಠಡಿಯಲ್ಲಿದ್ದರೆಂದು ತಿಳಿದುಬಂದಿದೆ. ಮೃತಪಟ್ಟ ಮಕ್ಕಳೆಲ್ಲರೂ 10 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು.
ಘಟನೆ ನಡೆದ ತಕ್ಷಣವೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಂದು, ಕುಸಿದುಬಿದ್ದ ಕಟ್ಟಡದ ಅವಶೇಷಗಳಲ್ಲಿ ಸಿಲುಕಿಕೊಂಡಿದ್ದ ಹಲವರನ್ನು ರಕ್ಷಿಸಿದ್ದಾರೆ.
ಗಾಯಾಳು ಮಕ್ಕಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
Next Story