ಚೀನಾದ ಶಾಲೆಯಲ್ಲಿ 40 ವಿದ್ಯಾರ್ಥಿಗಳು,ಶಿಕ್ಷಕರಿಗೆ ಚೂರಿ ಇರಿತ
ಬೀಜಿಂಗ್, ಜೂ.4: ಚೀನಾದ ಪ್ರಾಥಮಿಕ ಶಾಲೆಯೊಂದರಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಸುಮಾರು 40 ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಚೂರಿಯಿಂದ ಇರಿದಿರುವ ಘಟನೆ ವರದಿಯಾಗಿದೆ.
ಚೀನಾದ ಗ್ವಾಂಗ್ಕ್ಸಿ ಪ್ರಾಂತ್ಯದ ಶಾಲೆಯೊಂದರಲ್ಲಿ ಘಟನೆ ನಡೆದಿದೆ ಎಂದು ಚೀನಾದ ದಿನ ಪತ್ರಿಕೆಯೊಂದು ವರದಿ ಮಾಡಿದೆ.
ಚೂರಿ ದಾಳಿಯ ಬಗ್ಗೆ ಮತ್ತಷ್ಟು ವಿವರವನ್ನು ನಿರೀಕ್ಷಿಸಲಾಗುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಅಸಮಾಧಾನಿತ ಜನರು ಚೂರಿ ಇರಿಯುವ ಘಟನೆ ಚೀನಾದ ಹಲವು ಭಾಗಗಳಲ್ಲಿ ನಡೆಯುತ್ತಿದೆ. ದಾಳಿಕೋರರು ಮುಖ್ಯವಾಗಿ ಶಿಶು ವಿಹಾರ ಹಾಗೂ ಪ್ರಾಥಮಿಕ ಶಾಲೆಗಳಲ್ಲದೆ ಸಾರ್ವಜನಿಕ ಸಾರಿಗೆಯನ್ನು ಗುರಿಯಾಗಿರಿಸಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
Next Story