ಚೀನಾ ಜೊತೆಗಿನ ವ್ಯಾಪಾರ ಒಪ್ಪಂದ ಸುಭದ್ರ: ಟ್ರಂಪ್
ವಾಶಿಂಗ್ಟನ್, ಜೂ. 23: ಅಮೆರಿಕ-ಚೀನಾ ವ್ಯಾಪಾರ ಒಪ್ಪಂದ ಭದ್ರವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
‘‘ಚೀನಾದೊಂದಿಗಿನ ವ್ಯಾಪಾರ ಒಪ್ಪಂದ ಸಂಪೂರ್ಣವಾಗಿ ಭದ್ರವಾಗಿದೆ. ಅವರು (ಚೀನಾ) ಒಪ್ಪಂದದ ಅಂಶಗಳಿಗೆ ಬದ್ಧರಾಗಿ ನಡೆಯುವುದನ್ನು ಮುಂದುವರಿಸುತ್ತಾರೆ ಎಂದು ನಾನು ಆಶಿಸುವೆ’’ ಎಂದು ಟ್ವೀಟ್ ಒಂದರಲ್ಲಿ ಟ್ರಂಪ್ ಹೇಳಿದ್ದಾರೆ.
ಚೀನಾದೊಂದಿಗಿನ ವ್ಯಾಪಾರ ಒಪ್ಪಂದ ಚಾಲ್ತಿಯಲ್ಲಿದೆ ಎಂಬುದಾಗಿ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಕೂಡ ಸೋಮವಾರ ಹೇಳಿದ್ದಾರೆ. ಒಪ್ಪಂದ ಕೊನೆಗೊಂಡಿದೆ ಎಂಬ ನನ್ನ ಹಿಂದಿನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Next Story