50 ದೇಶಗಳ ಜನರಿಗೆ ಕ್ವಾರಂಟೈನ್ ನಿಯಮಗಳ ಸಡಿಲು: ಬ್ರಿಟನ್
ಲಂಡನ್, ಜು. 3: ಸುಮಾರು 50 ದೇಶಗಳಿಂದ ಇಂಗ್ಲೆಂಡ್ಗೆ ಬರುವವರಿಗಾಗಿ ವಿಧಿಸಲಾಗಿರುವ ಕ್ವಾರಂಟೈನ್ ನಿಯಮಗಳನ್ನು ತೆರವುಗೊಳಿಸಲಾಗುವುದು ಎಂದು ಬ್ರಿಟನ್ ಸಾರಿಗೆ ಸಚಿವ ಗ್ರಾಂಟ್ ಶಾಪ್ಸ್ ಶುಕ್ರವಾರ ತಿಳಿಸಿದ್ದಾರೆ.
‘‘ಪಟ್ಟಿಯಲ್ಲಿ 50ಕ್ಕೂ ಅಧಿಕ ದೇಶಗಳಿವೆ. ನಮ್ಮ ಸಾಗರೋತ್ತರ ಭೂಭಾಗಗಳನ್ನು ಸೇರಿಸಿದರೆ ಸಂಖ್ಯೆ 60ನ್ನೂ ದಾಟುತ್ತದೆ. ಈ ಎಲ್ಲ ದೇಶಗಳು ಮತ್ತು ಭೂಭಾಗಗಳ ಹೆಸರುಗಳನ್ನು ನಾವು ನಂತರ ಪ್ರಕಟಿಸುತ್ತೇವೆ’’ ಎಂದು ಅವರು ‘ಸ್ಕೈ ನ್ಯೂಸ್’ಗೆ ತಿಳಿಸಿದರು.
ಈಗಿನ ನಿಯಮಗಳ ಪ್ರಕಾರ, ಬ್ರಿಟನ್ಗೆ ಆಗಮಿಸುವವರು ತಮ್ಮನ್ನು 14 ದಿನಗಳ ಕಾಲ ಇತರರಿಂದ ಪ್ರತ್ಯೇಕಿಸಬೇಕಾಗಿದೆ.
Next Story