ಬಡ ದೇಶಗಳಲ್ಲಿನ ಅಪೌಷ್ಟಿಕತೆಯಿಂದ ಆರ್ಥಿಕತೆಗೆ 850 ಬಿಲಿಯ ಡಾಲರ್ ಹೊಡೆತ: ಅಧ್ಯಯನ
ಬಡ ದೇಶಗಳಲ್ಲಿನ ಅಪೌಷ್ಟಿಕತೆಯಿಂದ ಆರ್ಥಿಕತೆಗೆ 850 ಬಿಲಿಯ ಡಾಲರ್ ಹೊಡೆತ: ಅಧ್ಯಯನ
ಪ್ಯಾರಿಸ್ (ಫ್ರಾನ್ಸ್), ಜು. 9: ಅಭಿವೃದ್ಧಿಶೀಲ ದೇಶಗಳಲ್ಲಿ ಬಡತನ, ಅಪೌಷ್ಟಿಕತೆ ಮತ್ತು ಬೊಜ್ಜು ಪ್ರಮುಖ ಆರೋಗ್ಯ ಸವಾಲುಗಳಾಗಿವೆ. ಅಷ್ಟೇ ಅಲ್ಲದೆ, ಆರ್ಥಿಕ ಹೊಡೆತವನ್ನೂ ಅವು ನೀಡುತ್ತಿದ್ದು, ಉದ್ಯಮಗಳಿಗೆ ವರ್ಷಕ್ಕೆ 850 ಬಿಲಿಯ ಡಾಲರ್ ವರೆಗೆ ನಷ್ಟ ಉಂಟು ಮಾಡುತ್ತಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.
ಅಪೌಷ್ಟಿಕತೆಯು ಸಾಂಕ್ರಾಮಿಕ ರೋಗಗಳು ಹಾಗೂ ತೀವ್ರ ಹವಾಮಾನ ವಿಪತ್ತುಗಳಿಂದ ಜನರು ಚೇತರಿಸಿಕೊಳ್ಳುವ ಪ್ರಮಾಣವನ್ನು ತಗ್ಗಿಸುತ್ತದೆ. ಅದೇ ವೇಳೆ, ಉತ್ಪಾದಕತೆ ಮತ್ತು ಸಂಪಾದನೆಯಲ್ಲೂ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
‘‘ಅಪೌಷ್ಟಿಕತೆ ಮತ್ತು ಬೊಜ್ಜಿನ ಪರಿಣಾಮ ಮತ್ತು ಅಪಾಯಗಳು ಗಂಭೀರ ಪ್ರಮಾಣದ್ದಾಗಿವೆ ಹಾಗೂ ಅವುಗಳನ್ನು ನಿವಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಉದ್ಯಮಗಳ ಹಿತದೃಷ್ಟಿಯಿಂದ ಅಗತ್ಯವಾಗಿದೆ’’ ಎಂದು ಪ್ರಧಾನ ಸಂಶೋಧಕಿ, ಚಾತಮ್ ಹೌಸ್ನಲ್ಲಿ ಸೀನಿಯರ್ ರಿಸರ್ಚ್ ಫೆಲೋ ಆಗಿರುವ ಲಾರಾ ವೆಲ್ಲೆಸ್ಲಿ ಹೇಳುತ್ತಾರೆ.
‘‘ಅಪೌಷ್ಟಿಕತೆ ಪ್ರಮಾಣ ಅಧಿಕವಾಗಿರುವ ಅಭಿವೃದ್ಧಿಶೀಲ ದೇಶಗಳಲ್ಲಿ ಉತ್ಪಾದಕತೆ ಕೊರತೆಯ ವೆಚ್ಚವು ವರ್ಷಕ್ಕೆ 130 ಬಿಲಿಯ ಡಾಲರ್ನಿಂದ 850 ಬಿಲಿಯ ಡಾಲರ್ ನಷ್ಟಾಗುತ್ತದೆ’’ ಎಂದು ವರದಿ ಹೇಳುತ್ತದೆ.