ಐವರಿಕೋಸ್ಟ್ ಪ್ರಧಾನಿ ನಿಧನ
ಐವರಿಕೋಸ್ಟ್ ಪ್ರಧಾನಿ ನಿಧನ
ಆಬಿದ್ಜಾನ್ (ಐವರಿಕೋಸ್ಟ್), ಜು. 9: ಐವರಿಕೋಸ್ಟ್ ದೇಶದ ಪ್ರಧಾನಿ ಅಮದೌ ಗೋನ್ ಕೌಲಿಬಲಿ ಬುಧವಾರ ನಿಧನರಾಗಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.
ಅಕ್ಟೋಬರ್ ನಲ್ಲಿ ದೇಶದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಆಡಳಿತಾರೂಢ ಪಕ್ಷದ ಅಭ್ಯರ್ಥಿಯಾಗಿದ್ದರು.
‘‘ಸರಕಾರದ ಮುಖ್ಯಸ್ಥರಾಗಿರುವ ಪ್ರಧಾನಿ ಅಮದೌ ಗೋನ್ ಕೌಲಿಬಲಿ ಬುಧವಾರ ಮಧ್ಯಾಹ್ನ ಸಂಪುಟ ಸಭೆಯಲ್ಲಿ ಪಾಲ್ಗೊಂಡ ಬಳಿಕ ನಮ್ಮನ್ನು ಅಗಲಿದ್ದಾರೆ ಎಂದು ಪ್ರಕಟಿಸಲು ನನಗೆ ಅತ್ಯಂತ ನೋವಾಗಿದೆ’’ ಎಂದು ಐವರಿಕೋಸ್ಟ್ ಅಧ್ಯಕ್ಷೀಯ ಕಚೇರಿಯ ಮಹಾ ಕಾರ್ಯದರ್ಶಿ ಪ್ಯಾಟ್ರಿಕ್ ಅಚಿ ಸರಕಾರಿ ಟೆಲಿವಿಶನ್ನಲ್ಲಿ ಹೇಳಿದರು.
ಪದೇ ಪದೇ ಕಾಡುತ್ತಿದ್ದ ಹೃದಯದ ಕಾಯಿಲೆಗೆ ಚಿಕಿತ್ಸೆ ಪಡೆಯುವುದಕ್ಕಾಗಿ ಎರಡು ತಿಂಗಳ ಕಾಲ ಫ್ರಾನ್ಸ್ ನಲ್ಲಿದ್ದ ಬಳಿಕ ಅವರು ಕಳೆದ ವಾರ ತನ್ನ ಪಶ್ಚಿಮ ಆಫ್ರಿಕದ ದೇಶಕ್ಕೆ ಹಿಂದಿರುಗಿದ್ದರು.
2012ರಲ್ಲಿ ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಮೇ 2ರಂದು ವೈದ್ಯಕೀಯ ಚಿಕಿತ್ಸೆಗಾಗಿ ಫ್ರಾನ್ಸ್ ಗೆ ಹೋಗಿದ್ದರು.