ಅಫ್ಘಾನ್ ಸೇನೆಯ ವಾಯುದಾಳಿಗೆ ಕನಿಷ್ಠ 15 ಬಂಡುಕೋರರು ಮೃತ್ಯು
ಕಾಬೂಲ್,ನ.15: ಆಫ್ಘಾನಿಸ್ತಾನದ ಕಂದಹಾರ್ ಪ್ರಾಂತದಲ್ಲಿ ಅಫ್ಘಾನಿಸ್ತಾನದ ವಾಯುಪಡೆಗಳು ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 15 ಮಂದಿ ತಾಲಿಬಾನ್ ಬಂಡುಕೋರರು ಮೃತಪಟ್ಟಿದ್ದು, ಇತರ 10 ಮಂದಿ ಗಾಯಗೊಂಡಿದ್ದಾರೆ.
ಮಂಗಳವಾರ ರಾತ್ರಿ ತಾಲಿಬಾನ್ ಬಂಡುಕೋರರು ಮೈವಾಂಡ್ ಜಿಲ್ಲೆಯ ಸ್ರಾ ಬಾಘಾಲ್ ಎಂಬಲ್ಲಿರುವ ತಪಾಸಣಾ ಭದ್ರತಾ ತಪಾಸಣಾ ಠಾಣೆಗಳ ಮೇಲೆ ದಾಳಿ ನಡೆಸಿದ್ದರು.ಇದರ ಬೆನ್ನಲ್ಲೇ ಆಫ್ಘಾನ್ ಪಡೆಗಳು ವಾಯುದಾಳಿ ನಡೆಸಿದಾಗ 15 ಮಂದಿ ಬಂಡುಕೋರರು ಮೃತಪಟ್ಟಿದ್ದು, ಇತರ 10 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸ್ ವಕ್ತಾರ ಮಾಲ್ ನಾಸೀರ್ ಬರ್ಕಾಝಾಯಿ ತಿಳಿಸಿದ್ದಾರೆ.
Next Story