ಬ್ರೆಝಿಲ್: ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಅವಧಿಯಲ್ಲಿ ಹೆಚ್ಚಳ
ಬ್ರಿಝಿಲಿಂ, ಜೂನ್ 2: ಸಾಮೂಹಿಕ ಅತ್ಯಾಚಾರ ಆರೋಪಿಗಳಿಗೆ ನೀಡುವ ಶಿಕ್ಷೆ ಪ್ರಮಾಣದಲ್ಲಿ ಹೆಚ್ಚಳ ಮಾಡುವ ಮಸೂದೆಯನ್ನು ಇಲ್ಲಿನ ಸೆನೆಟ್ ಪಾಸು ಮಾಡಿದೆ. ಈಗ ಅತ್ಯಾಚಾರ ಆರೋಪಕ್ಕೆ ಆರರಿಂದ ಹತ್ತು ವರ್ಷ ಶಿಕ್ಷೆ ಇದೆ. ಸಾಮೂಹಿಕ ಅತ್ಯಾಚಾರಕ್ಕೆ ಹನ್ನೆರಡು ವರ್ಷ ಶಿಕ್ಷೆಇದೆ. ಹೊಸ ಕಾನೂನು ಪ್ರಕಾರ ಸಾಮೂಹಿಕ ಅತ್ಯಾಚಾರಕ್ಕೆ ಹದಿಮೂರು ವರ್ಷದವರೆಗೆ ಶಿಕ್ಷೆ ಲಭಿಸಲಿದೆ.ಬಲಿಪಶುವಿನ ವಯಸ್ಸು ಹದಿನಾಲ್ಕು ವರ್ಷಕ್ಕಿಂತ ಕಡಿಮೆ ಇದ್ದು ಅತ್ಯಾಚಾರಕ್ಕೊಳಗಾಗಿ ಮೃತರಾಗಿದ್ದರೆ ಇನ್ನಷ್ಟು ಕಠಿಣ ಶಿಕ್ಷೆ ನೀಡಲಾಗುವುದು.
Next Story