ಕೊರೋನ ಪುನರಾಗಮನ: ನ್ಯೂಜಿಲ್ಯಾಂಡ್ ನಲ್ಲಿ ಸೋಂಕಿತರ ಸಂಖ್ಯೆ 17ಕ್ಕೇರಿಕೆ
ವೆಲ್ಲಿಂಗ್ಟನ್,ಆ.13: ನ್ಯೂಝಿಲ್ಯಾಂಡ್ಗೆ ಕೋರೋನ ಸೋಂಕು ಮರಳಿ ಪ್ರವೇಶಿಸಿದ್ದು, ಆ ದೇಶದ ಬೃಹತ್ ನಗರ ಆಕ್ಲ್ಯಾಂಡ್ನಲ್ಲಿ ಗುರುವಾರ ಸೋಂಕಿತರ ಒಟ್ಟು ಸಂಖ್ಯೆ 17ಕ್ಕೇರಿದೆ. ಮುಂದಿನ ದಿನಗಳಲ್ಲಿ ಸೋಂಕುಪೀಡಿತರ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆಯೆಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೋನ ಸೋಂಕು ಮತ್ತೆ ತಲೆಯೆತ್ತಿರುವ ಹಿನ್ನೆಲೆಯಲ್ಲಿ ಆಕ್ಲ್ಯಾಂಡ್ನಲ್ಲಿ ಹೇರಲಾಗಿದ್ದ ಮೂರು ದಿನ ಹೇರಲಾಗಿದ್ದ ಲಾಕ್ಡೌನ್ ಅನ್ನು ಈಗ ವಿಸ್ತರಿಸಲಾಗಿದೆ.
ದಕ್ಷಿಣ ಪೆಸಿಫಿಕ್ ಸಾಗರಪ್ರದೇಶದ ರಾಷ್ಟ್ರವಾದ ನ್ಯೂಜಿಲ್ಯಾಂಡ್ ಕೊರೋನ ಸೋಂಕು ಮುಕ್ತವಾಗಿ 100 ದಿನಗಳಾದ ಬಳಿಕ, ರವಿವಾರ ಮತ್ತೆ ಈ ಸಾಂಕ್ರಾಮಿಕ ರೋಗವು ಸ್ಥಳೀಯರಲ್ಲಿ ಕಾಣಿಸಿಕೊಂಡಿತ್ತು.
Next Story