ಟ್ರಂಪ್ ಸೋದರ ರಾಬರ್ಟ್ ಅಸ್ವಸ್ಥ
ವಾಶಿಂಗ್ಟನ್,ಆ.15: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಸಹೋದರ ರಾಬರ್ಟ್ ಟ್ರಂಪ್ ಶುಕ್ರವಾರ ಶುಕ್ರವಾರ ಅಸ್ವಸ್ಥರಾಗಿದ್ದು, ಅವರನ್ನು ನ್ಯೂಯಾರ್ಕ್ ನಗರದ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ.
ರಾಬರ್ಟ್ ಟ್ರಂಪ್ ಹಠಾತ್ತನೆ ಯಾಕೆ ಅಸ್ವಸ್ಥರಾದರೆಂಬ ಬಗ್ಗೆ ಶ್ವೇತಭವನವು ಯಾವುದೇ ಮಾಹಿತಿ ನೀಡಿಲ್ಲ. ರಾಬರ್ಟ್ ಟ್ರಂಪ್ ಅವರು ಡೊನಾಲ್ಡ್ ಟ್ರಂಪ್ ಅವರ ನಾಲ್ವರು ಒಡಹುಟ್ಟಿದವರಲ್ಲೊಬ್ಬರಾಗಿದ್ದಾರೆ. ಅಮೆರಿಕದ ಅಧ್ಯಕ್ಷರ ಸೋದರತಂಗಿ ಮೇರಿ ಬರೆದಿದ್ದ ‘ ಟೂ ಮಚ್ ಆ್ಯಂಡ್ ನೆವರ್ ಇನಫ್’ ಕೃತಿಯ ಪ್ರಕಟನೆಯನ್ನು ತಡೆಹಿಡಿಯುವಂತೆ ಕೋರಿ ಟ್ರಂಪ್ ಕುಟುಂಬದ ಪರವಾಗಿ ರಾಬರ್ಟ್ ನ್ಯಾಯಾಲಯದ ಮೆಟ್ಟಲೇರಿದ್ದರು. ಈ ಕೃತಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ವಿವಾದಾತ್ಮಕ ವಿಷಯಗಳನ್ನು ಉಲ್ಲೇಖಿಸಲಾಗಿದೆಯೆಂದು ಹೇಳಲಾಗುತ್ತಿದೆ.
Next Story