ಕಕ್ಷೆ ತಲುಪಲು ವಿಫಲವಾದ ಚೀನಾದ ಉಪಗ್ರಹ
ಬೀಜಿಂಗ್, ಸೆ. 13: ಚೀನಾದ ಆಪ್ಟಿಕಲ್ ದೂರ ಸಂವೇದಿ ಉಪಗ್ರಹ ‘ಜಿಲಿನ್-1 ಗಾವೊಫೆನ್ 02ಸಿ’ ತನ್ನ ನಿಗದಿತ ಕಕ್ಷೆಯನ್ನು ತಲುಪಲು ಶನಿವಾರ ವಿಫಲವಾಗಿದೆ ಎಂದು ಸರಕಾರಿ ಒಡೆತನದ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.
ಉಪಗ್ರಹವನ್ನು ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಕ್ವಾಯಿಝೂ-1ಎ ರಾಕೆಟ್ ಮೂಲಕ ಶನಿವಾರ ಉಡಾಯಿಸಲಾಗಿತ್ತು.
ಉಪಗ್ರಹದ ವೈಫಲ್ಯದ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅದು ಹೇಳಿದೆ.
Next Story