ಅಕ್ಟೋಬರ್ 1ರಿಂದ ಮತ್ತೆ ಕಾರ್ಯಾಚರಿಸಲು ಒಮಾನ್ ವಿಮಾನ ನಿಲ್ದಾಣ ಸಿದ್ಧ
ಮಸ್ಕತ್, ಸೆ.23:ಒಮಾನ್ ವಿಮಾನ ನಿಲ್ದಾಣ ಅಕ್ಟೋಬರ್ 1ರಿಂದ ಮತ್ತೆ ಕಾರ್ಯಾಚರಿಸಲಿದ್ದು, ಅದಕ್ಕೂ ಮೊದಲು ಸೆಪ್ಟಂಬರ್ 25 ರಂದು ಶುಕ್ರವಾರ ಮಸ್ಕತ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಸಿದ್ಧತೆಯನ್ನು ಪರೀಕ್ಷಿಸುವ ಪ್ರಯೋಗದಲ್ಲಿ ಪಾಲ್ಗೊಳ್ಳಲು ಒಮಾನ್ ವಿಮಾನ ನಿಲ್ದಾಣದ ಅಧಿಕಾರಿಗಳು ಸಾಮಾನ್ಯ ಜನರಿಗೆ ಅವಕಾಶ ನೀಡುತ್ತಿದ್ದಾರೆ.
ಅಕ್ಟೋಬರ್ 1 ರಂದು ಯೋಜಿತ ವಿಮಾನ ನಿಲ್ದಾಣವನ್ನು ಪುನಃ ತೆರೆಯುವ ಮೊದಲು ಬೆಳಗ್ಗೆ 9:00 ಗಂಟೆಗೆ ಟ್ರಯಲ್ ನಲ್ಲಿ ಪಾಲ್ಗೊಳ್ಳುವಂತೆ ಒಮಾನ್ ವಿಮಾನ ನಿಲ್ದಾಣದ ಅಧಿಕಾರಿಗಳು ಒಮಾನಿ ಪ್ರಜೆಗಳು ಹಾಗೂ ವಲಸಿಗ ನಿವಾಸಿಗಳಲ್ಲಿ ಸ್ವಯಂ ಸೇವಕರನ್ನು ಆಹ್ವಾನಿಸಿದ್ದಾರೆ.
ವಾಣಿಜ್ಯ ಕಾರ್ಯಾಚರಣೆಗಳು ಪುನರಾರಂಭಗೊಂಡಾಗ ಮಸ್ಕತ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಕಾರ್ಯ ವಿಧಾನಗಳು ಹಾಗೂ ಕೋವಿಡ್-19 ಪರೀಕ್ಷೆಯನ್ನು ನಡೆಸಲಿದೆ.
Next Story