ಸಿಖ್ ಸಮುದಾಯಕ್ಕಾಗಿ ಬೈಡನ್ ತಂಡದಿಂದ ಕಾರ್ಯಕ್ರಮ
ವಾಶಿಂಗ್ಟನ್, ಸೆ. 28: ಅಮೆರಿಕದಲ್ಲಿರುವ ಸಿಖ್ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಅವೆುರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡನ್ರ ಪ್ರಚಾರ ತಂಡವು ಯೋಜನೆಯೊಂದನ್ನು ಆರಂಭಿಸಿದೆ. ಅದೇ ವೇಳೆ, ವಿದೇಶೀಯರ ಭಯ ಸೇರಿದಂತೆ ಅಮೆರಿಕದಲ್ಲಿರುವ ಅಲ್ಪಸಂಖ್ಯಾತ ಧಾರ್ಮಿಕ ಗುಂಪುಗಳು ಎದುರಿಸುತ್ತ್ಟಿರುವ ಸವಾಲುಗಳನ್ನು ಬಗೆಹರಿಸುವುದಾಗಿಯೂ ಅದು ಹೇಳಿದೆ.
‘ಸಿಖ್ ಅವೆುರಿಕನ್ಸ್ ಫಾರ್ ಬೈಡನ್’ ಎಂಬ ಯೋಜನೆಯನ್ನು ಪ್ರಕಟಿಸಿದ ಬೈಡನ್ ಪ್ರಚಾರ ತಂಡವು, ಸಿಖ್-ಅಮೆರಿಕನ್ ಯುವಕರನ್ನು ಶಾಲೆಗಳಲ್ಲಿ ರಕ್ಷಿಸಲು ತನ್ನಲ್ಲಿ ಯೋಜನೆಗಳಿವೆ ಎಂದಿದೆ.
Next Story