2016ರಲ್ಲಿ ಮಗಳನ್ನೇ ಉಪಾಧ್ಯಕ್ಷ ಅಭ್ಯರ್ಥಿ ಮಾಡಲು ಮುಂದಾಗಿದ್ದ ಟ್ರಂಪ್!
ವಾಶಿಂಗ್ಟನ್, ಸೆ. 29: ಅವೆುರಿಕದ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಡೊನಾಲ್ಡ್ ಟ್ರಂಪ್, ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ತನ್ನ ಮಗಳು ಇವಾಂಕಾ ಟ್ರಂಪ್ರನ್ನು ನೇಮಿಸಲು ಮುಂದಾಗಿದ್ದರು ಎಂದು ರಿಕ್ ಗೇಟ್ಸ್ ಬರೆದಿರುವ ಹೊಸ ಪುಸ್ತಕವೊಂದು ತಿಳಿಸಿದೆ.
ರಿಕ್ ಗೇಟ್ಸ್, ಟ್ರಂಪ್ರ ಚುನಾವಣಾ ತಂಡದ ಉಪ ಮ್ಯಾನೇಜರ್ ಆಗಿದ್ದರು. ಪುಸ್ತಕವು ಅಕ್ಟೋಬರ್ 13ರಂದು ಬಿಡುಗಡೆಯಾಗಲಿದೆ.
‘‘ನನ್ನ ಪ್ರಕಾರ, ಇವಾಂಕಾ ಉಪಾಧ್ಯಕ್ಷ ಅಭ್ಯರ್ಥಿಯಾಗಬೇಕು. ಅವಳು ಬುದ್ಧಿವಂತೆ, ಚಾಣಾಕ್ಷೆ, ಸುಂದರಿ ಹಾಗೂ ಜನರು ಅವಳನ್ನು ಇಷ್ಟಪಡುತ್ತಾರೆ’’ ಎಂಬುದಾಗಿ ಪ್ರಚಾರ ತಂಡದ ಸಭೆಯಲ್ಲಿ ಟ್ರಂಪ್ ಹೇಳಿದ್ದರು ಎಂದು ಪುಸ್ತಕ ಹೇಳಿದೆ.
ಈ ಬಗ್ಗೆ ಅವರ ಪ್ರಚಾರ ತಂಡವು ಎರಡು ಬಾರಿ ಸಮೀಕ್ಷೆಯನ್ನೂ ನಡೆಸಿತು. ಆದರೆ, ಕೊನೆಗೆ, ಸ್ವತಃ ಇವಾಂಕಾ ತನ್ನ ತಂದೆಯ ಬಳಿ ಹೋಗಿ, ‘‘ಇದು ಸಮಂಜಸವಲ್ಲ’’ ಎಂದು ಹೇಳಿದ ಬಳಿಕ ಆ ವಿಷಯ ಅಲಿಗೆ ನಿಂತಿತು ಎಂದು ಪುಸ್ತಕ ಹೇಳಿದೆ.
ಬಳಿಕ, ಇಂಡಿಯಾನ ರಾಜ್ಯದ ಗವರ್ನರ್ ಮೈಕ್ ಪೆನ್ಸ್ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಹಾಗೂ ಬಳಿಕ ಉಪಾಧ್ಯಕ್ಷರಾಗಿಯೂ ಆಯ್ಕೆಯಾದರು.