ಬ್ರೆಝಿಲ್ನಲ್ಲಿ ಏಳು ಮಂದಿಯಿಂದ ಅಪ್ರಾಪ್ತೆಯ ಅತ್ಯಾಚಾರ
ಸಾವೋ ಪಾವ್ಲೊ, (ಬ್ರೆಝಿಲ್) ಜೂನ್ 18: ಬ್ರೆಝಿಲ್ನಲ್ಲಿ ಕಳೆದ ತಿಂಗಳು ಹದಿನಾರುವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಏಳು ಮಂದಿ ಪುರುಷರನ್ನು ಅಪರಾಧಿಗಳು ಎಂದು ಘೋಷಿಸಲಾಗಿದೆ. ಇಡೀ ವಿಶ್ವವನ್ನೇ ಕಂಪಿಸುವಂತೆಮಾಡಿದ್ದ ಈ ಪ್ರಕರಣ ಕಳೆದ ಮೇ ತಿಂಗಳ 21ಕ್ಕೆ ಬಹಿರಂಗವಾಗಿತ್ತು. ಆರೋಪಿಗಳು ಗ್ಯಾಂಗ್ ರೇಪ್ ಬಳಿಕ ವೀಡಿಯೊ ಮತ್ತು ಫೋಟೊವನ್ನು ಸೋಶಿಯಲ್ ಮೀಡಿಯದಲ್ಲಿ ಹಾಕಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ಒಂದು ನ್ಯಾಯಾಲಯ ಓರ್ವ ಅಪ್ರಾಪ್ತ ಬಾಲಕನ ಸಹಿತ ಏಳು ಮಂದಿಯನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ನಿರ್ಧರಿಸಿದೆ. ಆದರೆ ಆರೋಪಿಗಳಲ್ಲಿ ಒಬ್ಬ ಮಾತ್ರ ಸೆರೆಯಾಗಿದ್ದು ಉಳಿದ ಆರು ಮಂದಿ ಪರಾರಿಯಾಗಿದ್ದಾರೆ. ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಡಝನ್ಗಟ್ಟಲೆ ಮಂದಿ ಇದ್ದರು. ಆದ್ದರಿಂದ ಪ್ರಕರಣದ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ರೆಝಿಲ್ ರಾಜಧಾನಿ ರಿಯೊಡಿಜನೈರೊದಲ್ಲಿ ಈ ವರ್ಷ ಆಗಸ್ಟ್ನಲ್ಲಿ ಒಲಿಂಪಿಕ್ ನಡೆಯಲಿದೆ. ಈ ಘಟನೆಯನಂತರ ಒಲಿಂಪಿಕ್ನ ಮೇಲೆಯೂ ಕರಿನೆರಳು ಬಿದ್ದಿದೆ ಎಂದು ವರದಿಯಾಗಿದೆ.