ಶೃಂಗಸಭೆಯ ಬಳಿಕ ರಶ್ಯ ಜೊತೆ ಮಾತುಕತೆ: ನ್ಯಾಟೊ
ಬ್ರಸೆಲ್ಸ್, ಜು. 4: ಈ ವಾರ ವಾರ್ಸಾದಲ್ಲಿ ನಡೆಯಲಿರುವ ಶೃಂಗಸಭೆಯ ಬಳಿಕ ನ್ಯಾಟೊ ರಶ್ಯದ ಜೊತೆ ಔಪಚಾರಿಕ ಮಾತುಕತೆಗಳನ್ನು ನಡೆಸಲಿದೆ ಎಂದು ನ್ಯಾಟೊ ಮುಖ್ಯಸ್ಥ ಜೆನ್ಸ್ ಸ್ಟಾಲ್ಟನ್ಬರ್ಗ್ ಸೋಮವಾರ ಹೇಳಿದ್ದಾರೆ.
ಈ ಶೃಂಗಸಭೆಯಲ್ಲಿ ಯುಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸೇನಾ ರಚನೆಗೆ ಸೇನಾ ಒಕ್ಕೂಟವು ಅಂಗೀಕಾರ ನೀಡಲಿದೆ.
2014 ಜೂನ್ನಲ್ಲಿ ನ್ಯಾಟೊ ಮತ್ತು ರಶ್ಯಗಳ ನಡುವಿನ ಸಂಬಂಧ ಹಳಸಿದ ಬಳಿಕ ಮೊದಲ ಬಾರಿಗೆ ಎಪ್ರಿಲ್ನಲ್ಲಿ ನ್ಯಾಟೊ-ರಶ್ಯ ಮಂಡಳಿಯ ಮೊದಲ ಸಭೆ ನಡೆಯಿತು. ಆದರೆ, ಯುಕ್ರೇನ್ ಮತ್ತು ಇತರ ವಿಷಯಗಳಲ್ಲಿ ‘‘ತೀವ್ರ ಭಿನ್ನಾಭಿಪ್ರಾಯ’’ದೊಂದಿಗೆ ಸಭೆ ಮುಕ್ತಾಯಗೊಂಡಿತ್ತು.
Next Story