ಸೌದಿ ಅರೇಬಿಯಕ್ಕೆ ಬರುತ್ತಿದ್ದ 31 ಅಕ್ರಮ ವಲಸಿಗರ ಬಂಧನ
ರಿಯಾದ್, ಜು. 12: ಸಮುದ್ರದ ಮೂಲಕ ಸೌದಿ ಅರೇಬಿಯ ತಲುಪಲು ಯತ್ನಿಸುತ್ತಿದ್ದ 31 ಅಕ್ರಮ ವಲಸಿಗರನ್ನು ಸೌದಿ ಸಮುದ್ರ ಗಸ್ತು ಪಡೆಗಳು ತಡೆದಿವೆ ಎಂದು ಅಧಿಕೃತ ಮಾಧ್ಯಮ ಮಂಗಳವಾರ ವರದಿ ಮಾಡಿದೆ.
ಕಳೆದ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ವಲಸಿಗರನ್ನು ತಡೆಯಲಾಗಿತ್ತು ಎಂದು ಸೌದಿ ಪ್ರೆಸ್ ಏಜನ್ಸಿ ತಿಳಿಸಿದೆ.
ಸುಡಾನ್ನ ಬೀಚ್ಗಳಿಂದ ಮರದ ದೋಣಿಗಳಲ್ಲಿ ಸೌದಿ ಅರೇಬಿಯಕ್ಕೆ ಬರುತ್ತಿದ್ದ 31 ವಲಸಿಗರ ಗುಂಪನ್ನು ಗಡಿ ಯೋಧರು ಹಿಡಿದಿದ್ದಾರೆ ಎಂದು ಎಸ್ಪಿಎ ಹೇಳಿದೆ.
ಅವರ ಪೈಕಿ ಮೂರನೆ ಒಂದು ಭಾಗಕ್ಕಿಂತಲೂ ಹೆಚ್ಚಿನವರು ಮಹಿಳೆಯರು.
Next Story