ಬ್ರಸೆಲ್ಸ್: ಪೊಲೀಸರಿಗೆ ಇರಿದ ಯುವಕನ ಹತ್ಯೆ
ಬ್ರಸೆಲ್ಸ್, ಆ.7: ಚೂರಿಯೊಂದನ್ನು ಝಳಪಿಸುತ್ತಾ ಇಬ್ಬರು ಪೊಲೀಸರನ್ನು ಇರಿದುಗಾಯಗೊಳಿಸಿದ ಯುವಕನೊಬ್ಬನನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದ ಘಟನೆ ಬ್ರುಸೆಲ್ಸ್ನ ದಕ್ಷಿಣ ಪ್ರಾಂತದ ನಗರವಾದ ಚಾರ್ಲೆರೊಯ್ನಲ್ಲಿ ಶನಿವಾರ ನಡೆದಿದೆ. ಚಾಕುವಿನಲ್ಲಿ ಯುವಕ ಹಲ್ಲೆ ಮಾಡಿದ್ದರಿಂದಾಗಿ ಮಹಿಳಾ ಪೊಲೀಸ್ ಅಧಿಕಾರಿಯ ಮುಖದ ಮೇಲೆ ಆಳವಾದ ಗಾಯಗಳಾಗಿವೆ ಹಾಗೂ ಇನ್ನೋರ್ವ ಪೊಲೀಸ್ ಅಧಿಕಾರಿಗೂ ಲಘುವಾದ ಗಾಯಗಳಾಗಿವೆಯೆಂದು ಬೆಲ್ಜಿಯಂ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕನನ್ನು ಗುಂಡಿಕ್ಕಿ ಕೊಂದರೆಂದು ಮೂಲಗಳು ತಿಳಿಸಿವೆ. ಆದರೆ ಇದು ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯವೇ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಮಾರ್ಚ್ 22ರಂದು ಬ್ರುಸೆಲ್ಸ್ ವಿಮಾನನಿಲ್ದಾಣದ ಮೇಲೆ ಆತ್ಮಹತ್ಯಾ ಬಾಂಬರ್ಗಳು ದಾಳಿ ನಡೆಸಿ 32 ಮಂದಿಯನ್ನು ಹತ್ಯೆಗೈದ ಘಟನೆಯ ಬಳಿಕ ಬೆಲ್ಜಿಯಂ ದೇಶಾದ್ಯಂತ ಭದ್ರತಾ ಕಟ್ಟೆಚ್ಚರವನ್ನು ಘೋಷಿಸಲಾಗಿದೆ.
Next Story