ಕಿರ್ಗಿಸ್ತಾನದ ಚೀನಾ ರಾಯಭಾರಿ ಕಚೇರಿ ಬಳಿ ಕಾರು ಬಾಂಬುಸ್ಫೋಟ
ಓರ್ವ ಸಾವು, ಮೂವರಿಗೆ ಗಾಯ
ಮಾಸ್ಕೊ, ಆ.30: ಕಿರ್ಗಿಸ್ತಾನ ರಾಜಧಾನಿಯಲ್ಲಿರುವ ಚೀನಾ ರಾಯಭಾರಿ ಕಚೇರಿಯ ಹೊರಗೆ ಸಂಭವಿಸಿದ ಕಾರು ಬಾಂಬು ಸ್ಫೋಟದಲ್ಲಿ ಕಾರಿನ ಚಾಲಕ ಸಾವನ್ನಪಿದ್ದರೆ, ಮೂವರು ಗಾಯಗೊಂಡಿದ್ದಾರೆ ಎಂದು ವಾರ್ತಾ ಏಜೆನ್ಸಿಗಳು ವರದಿ ಮಾಡಿವೆ.
ಮಂಗಳವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ರಾಯಭಾರಿ ಕಚೇರಿಯ ಗೇಟ್ನ ಮೂಲಕ ಒಳನುಳಿದ ಕಾರು ಸ್ಫೋಟಗೊಂಡಿದೆ. ಇದೊಂದು ಆತ್ಮಾಹುತಿ ಬಾಂಬ್ ದಾಳಿಯಾಗಿರಬಹುದು ಎಂದು ಶಂಕಿಸಲಾಗಿದೆ.
ದಾಳಿಕೋರ ಸಾವನ್ನಪ್ಪಿದ್ದು, ರಾಯಭಾರಿ ಕಚೇರಿಯ ಮೂವರು ನೌಕರರು ಗಾಯಗೊಂಡಿದ್ದಾರೆ ಎಂದು ಕಿರ್ಗಿಝ್ಸ್ತಾನದ ಆರೋಗ್ಯ ಸಚಿವಾಲಯ ತಿಳಿಸಿದೆ.
Next Story