ದಕ್ಷಿಣ ಕೊರಿಯಾದಲ್ಲಿ ಭೂಕಂಪ
ಸಿಯೋಲ್ , ಸೆ.12 : ದಕ್ಷಿಣ ಕೊರಿಯಾದ ನೈಋತ್ಯ ಪ್ರದೇಶದಲ್ಲಿ ಸೋಮವಾರ 5.3 ರಿಕ್ಟರ್ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ಹವಾಮಾನ ಇಲಾಖೆ ತಿಳಿಸಿದೆ.
ಸಿಯೋಲ್ ನಿಂದ ಸುಮಾರು 371 ಕಿಲೋಮೀಟರ್ ದೂರದಲ್ಲಿರುವ ಎಂಗ್ಜು ಎಂಬಲ್ಲಿಗೆ ದಕ್ಷಿಣದಲ್ಲಿ 8 ಕಿಮೀ ದೂರದಲ್ಲಿ ಭೂಕಂಪದ ಕೇಂದ್ರ ಎಂದು ಗುರುತಿಸಲಾಗಿದೆ ಎಂದು ಬೂಸಾನ್ ಪ್ರಾದೇಶಿಕ ಹವಾಮಾನ ಆಡಳಿತ ಹೇಳಿದೆ. ಎಂಗ್ಸಾಂಗ್ ಪ್ರಾಂತ್ಯದಾದ್ಯಂತ ಕಂಪನದ ಅನುಭವವಾಗಿದೆ ಎಂದು ಹೇಳಲಾಗಿದೆ.
ಈ ಪ್ರದೇಶದಲ್ಲಿ ಮನೆಗಳು ಕಂಪಿಸಿರುವ ಬಗ್ಗೆ ನಿವಾಸಿಗಳು ಹೇಳಿದ್ದಾರೆ. ಆದರೆ ಯಾವುದೇ ಪ್ರಾಣ ಅಥವಾ ಸೊತ್ತಿನ ಹಾನಿ ಆಗಿರುವ ವರದಿಗಳಿಲ್ಲ.
Next Story