ಅಮೆರಿಕ: ಪೊಲೀಸರಿಂದ ಕರಿಯ ವ್ಯಕ್ತಿಯ ಹತ್ಯೆ
ಟುಲ್ಸ (ಅಮೆರಿಕ), ಸೆ. 18: ‘‘ಕೈ ಮೇಲೆತ್ತುವಂತೆ ಪದೇ ಪದೇ ನೀಡಿದ ಎಚ್ಚರಿಕೆಗಳ ಹೊರತಾಗಿಯೂ, ಧಿಕ್ಕರಿಸಿ ರಸ್ತೆಯ ಮಧ್ಯದಲ್ಲಿ ನಿಲ್ಲಿಸಲಾಗಿದ್ದ ತನ್ನ ಕಾರಿನೆಡೆಗೆ ಹೋದ’’ ಆಫ್ರಿಕನ್ ಅಮೆರಿಕನ್ ವ್ಯಕ್ತಿಯೊಬ್ಬನನ್ನು ಪೊಲೀಸ್ ಅಧಿಕಾರಿಯೊಬ್ಬರು ಗುಂಡಿಟ್ಟು ಕೊಂದಿದ್ದಾರೆ ಎಂದು ಓಕ್ಲಹಾಮ ರಾಜ್ಯದ ಟುಲ್ಸ ನಗರದ ಪೊಲೀಸರು ಹೇಳಿದ್ದಾರೆ.
40 ವರ್ಷದ ಟೆರೆನ್ಸ್ ಕ್ರಚರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದರು. ಶುಕ್ರವಾರ ರಾತ್ರಿ 8:30ರ ಸುಮಾರಿಗೆ ಪೊಲೀಸ್ ಅಧಿಕಾರಿ ಒಮ್ಮೆ ಗುಂಡು ಹಾರಿಸಿದ ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
Next Story