ಅಧ್ಯಕ್ಷೀಯ ಚುನಾವಣೆ: ಹಿಲರಿಗೆ ‘ನ್ಯೂಯಾರ್ಕ್ ಟೈಮ್ಸ್’ ಬೆಂಬಲ
ವಾಶಿಂಗ್ಟನ್, ಸೆ. 25: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಹಿಲರಿ ಕ್ಲಿಂಟನ್ಗೆ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಶನಿವಾರ ಬೆಂಬಲ ಸೂಚಿಸಿದೆ.
ಅಮೆರಿಕ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಹಿಲರಿ ತನ್ನ ರಿಪಬ್ಲಿಕನ್ ಪಕ್ಷದ ಎದುರಾಳಿ ಡೊನಾಲ್ಡ್ ಟ್ರಂಪ್ಗಿಂತ ಹೆಚ್ಚು ಅರ್ಹತೆ ಹೊಂದಿದ್ದಾರೆ ಎಂದು ಪತ್ರಿಕೆ ಹೇಳಿದೆ.
ಹಿಲರಿ ತನ್ನ ತಲೆಮಾರಿನ ನಿಷ್ಠುರ ರಾಜಕಾರಣಿಗಳ ಪೈಕಿ ಓರ್ವರು ಹಾಗೂ ಸಹಕಾರ ಮನೋಭಾವದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಪತ್ರಿಕೆ ಹಿಲರಿಯನ್ನು ಬಣ್ಣಿಸಿದೆ.
Next Story