ಎ.ಆರ್. ರಹ್ಮಾನ್ ರ ಬಗ್ಗೆ ಇಳಯರಾಜ ಅವರ ಅಭಿಪ್ರಾಯ ಏನಿದೆ ನೋಡಿ
ವಾಷಿಂಗ್ಟನ್, ಸೆ.27: ಖ್ಯಾತ ಸಂಗೀತ ನಿರ್ದೇಶಕರಾದ ಎ.ಆರ್. ರಹ್ಮಾನ್ ಬಗ್ಗೆ ಪ್ರತಿಕ್ರಿಯಿಸಲು ಪ್ರಸಿದ್ಧ ಸಂಗೀತ ತಜ್ಞ ಇಳಯರಾಜ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ವಾಷಿಂಗ್ಟನ್ನಲ್ಲಿ ಸ್ಥಳೀಯ ಭಾರತ-ಅಮೆರಿಕನ್ ಚ್ಯಾನೆಲ್ ಕಾರ್ಯಕ್ರಮದ ನಡುವೆ ಎದ್ದು ಬಂದ ಪ್ರಶ್ನೆಗೆ ಸ್ವಲ್ಪ ಬೇಸರದಿಂದಲೇ ಇಳಯರಾಜಾ ಪ್ರತಿಕ್ರಿಯಿಸಿದ್ದಾರೆ. ಯಾಕೆ ನೀವು ನನ್ನಲ್ಲಿ ರಹ್ಮಾನ್ ಕುರಿತು ಕೇಳುತ್ತಿದ್ದೀರಿ. ನಿಮಗೆ ಅವರ ಬಗ್ಗೆ ಇಷ್ಟವಿಲ್ಲದ್ದರಿಂದಲೇ ಎಂದು ಟಿವಿ ಚ್ಯಾನೆಲ್ ಪ್ರಸ್ತುತಿಕಾರರನನ್ನು ಇಳಯರಾಜ ಮರುಪ್ರಶ್ನೆ ಮಾಡಿದ್ದಾರೆ. ನಿಮಗೆ ರಹ್ಮಾನ್ ಕುರಿತು ಒಂದು ಅಭಿಪ್ರಾಯ ಇರಬಹುದು ಎಂದು ಇಳಯರಾಜಾ ಈ ಸಂದರ್ಭದಲ್ಲಿ ಹೇಳಿದ್ದಾರೆ. ಇಂಡಿಯನ್ ಅಮೆರಿಕನ್ ವಂಶೀಯರು ಹೆಚ್ಚಾಗಿ ವಾಸಿಸುತ್ತಿರುವ ವಾಷಿಂಗ್ಟನ್ ಡಿಸಿಯಲ್ಲಿ ಏರ್ಪಡಿಸಿದ ಸಂಗೀತಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಅಮೆರಿಕಕ್ಕೆ ಬಂದಿದ್ದರು ಎಂದು ವರದಿ ತಿಳಿಸಿದೆ.
Next Story