ಚೀನಾದಲ್ಲಿ ಪ್ರಬಲ ಸ್ಫೋಟ
14 ಸಾವು; 147 ಮಂದಿಗೆ ಗಾಯ
ಬೀಜಿಂಗ್, ಅ. 25: ವಾಯುವ್ಯ ಚೀನಾದ ಮನೆಯೊಂದರಲ್ಲಿ ಸೋಮವಾರ ನಡೆದ ಪ್ರಬಲ ಸ್ಫೋಟವೊಂದರಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಹಾಗೂ 147 ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರಿ ವಾರ್ತಾ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ. ಶಾಂಕ್ಸಿ ಪ್ರಾಂತದ ಕ್ಸಿನ್ಮಿನ್ ಪಟ್ಟಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ, ಸ್ಥಳೀಯ ಆಸ್ಪತ್ರೆ ಸೇರಿದಂತೆ ಡಝನ್ಗಟ್ಟಳೆ ಕಟ್ಟಡಗಳು ಹಾನಿಗೊಂಡವು ಎಂದು ಸುದ್ದಿ ಸಂಸ್ಥೆ ತಿಳಿಸಿದೆ. ಅಕ್ರಮವಾಗಿ ಶೇಖರಿಸಿಡಲಾದ ಸ್ಫೋಟಕಗಳಿಂದಾಗಿ ಸ್ಫೋಟ ಸಂಭವಿಸಿದೆ ಎಂದು ಆರಂಭಿಕ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
Next Story