ವಾಯು ಮಾಲಿನ್ಯದಿಂದ ಅಧಿಕ ರಕ್ತದೊತ್ತಡ: ಅಧ್ಯಯನ
ಪ್ಯಾರಿಸ್, ಅ. 25: ನಗರ ವಾಯುಮಾಲಿನ್ಯಕ್ಕೆ ದೀರ್ಘ ಕಾಲ ತೆರೆದುಕೊಂಡರೆ ಅಧಿಕ ರಕ್ತದೊತ್ತಡಕ್ಕೆ ಸಿಲುಕು ಅಪಾಯ ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ. ಯುರೋಪ್ನ ನಗರಗಳ 41,000ಕ್ಕೂ ಅಧಿಕ ನಿವಾಸಿಗಳ ಮೇಲೆ ನಡೆಸಿದ ಅಧ್ಯಯನದ ವರದಿ ‘ಯುರೋಪಿಯನ್ ಹಾರ್ಟ್ ಜರ್ನಲ್’ನಲ್ಲಿ ಪ್ರಕಟಗೊಂಡಿದೆ. ನಿರಂತರ ಶಬ್ದ ಮಾಲಿನ್ಯ, ಅದರಲ್ಲೂ ವಿಶೇಷವಾಗಿ ವಾಹನಗಳ ಸಂಚಾರದ ಸದ್ದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
Next Story