ಜೆರುಸಲೇಂ:ಪಾದಚಾರಿಗಳ ಮೇಲೆ ನುಗ್ಗಿದ ಟ್ರಕ್ ನಾಲ್ವರ ಸಾವು
ಭಯೋತ್ಪಾದಕ ಕೃತ್ಯದ ಶಂಕೆ
ಜೆರುಸಲೇಂ,ಜ.8: ಇಲ್ಲಿಯ ಜನನಿಬಿಡ ಪ್ರದೇಶದಲ್ಲಿ ರವಿವಾರ ಟ್ರಕ್ಕೊಂದು ಪಾದಚಾರಿಗಳ ಗುಂಪಿನ ಮೇಲೆ ನುಗ್ಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಕನಿಷ್ಠ 15 ಜನರು ಗಾಯಗೊಂಡಿದ್ದಾರೆ. ಇದು ಉದ್ದೇಶಪೂರ್ವಕವಾಗಿ ನಡೆಸಲಾದ ಕೃತ್ಯವಾಗಿದೆ ಎಂದು ಪೊಲೀಸರು ಬಣ್ಣಿಸಿದ್ದಾರೆ.
ಇದೊಂದು ಭಯೋತ್ಪಾದಕ ದಾಳಿ, ಟ್ರಕ್ ನುಗ್ಗಿಸಿ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ವಕ್ತಾರೆ ಇಸ್ರೇಲಿ ರೇಡಿಯೊದಲ್ಲಿ ಹೇಳಿದರು. ಬಲಿಪಶುಗಳ ದೇಹಗಳು ರಸ್ತೆಯಲ್ಲಿ ಹರಡಿದ್ದವು. ಟ್ರಕ್ ಚಾಲಕನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ ಎಂದು ರೇಡಿಯೊ ವರದಿ ಮಾಡಿದೆ.
ಸುಮಾರು 15 ಜನರು ಗಾಯಗೊಂಡಿದ್ದಾರೆ ಮತ್ತು ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮ್ಯಾಗೆನ್ ಡೇವಿಡ್ ಆಡಂ ಆ್ಯಂಬುಲನ್ಸ್ ಸೇವೆಯು ತಿಳಿಸಿದೆ.
ಟ್ರಕ್ ಜೆರುಸಲೇಂನಲ್ಲಿ ನಿಯೋಜಿತ ಇಸ್ರೇಲಿ ಸೈನಿಕರ ಮೇಲೆ ನುಗ್ಗಿದೆ ಎಂದು ಇಸ್ರೇಲ್ ಪೊಲೀಸರು ಹೇಳಿದ್ದಾರೆ.
Next Story