ವಿಮಾನದಲ್ಲಿ 80 ಫಾಲ್ಕನ್ ಹಕ್ಕಿಗಳ ಪ್ರಯಾಣ !
ದುಬೈ,ಜ.31:ವಿಮಾನವೊಂದರಲ್ಲಿ 80 ಹದ್ದುಗಳನ್ನು ಸಾಗಿಸುವ ಚಿತ್ರವೊಂದು ‘ರೆಡಿಟ್’ನಲ್ಲಿ ಪ್ರಕಟಗೊಂಡಿದ್ದು ವೈರಲ್ ಆಗಿದೆ. ಈ ಪಕ್ಷಿಗಳಿಗೆ ಸೌದಿ ರಾಜಕುಮಾರ ಟಿಕೆಟ್ಗಳನ್ನು ಖರೀದಿಸಿದ್ದಾರೆ ಎಂದು ‘ಬಿಸ್ನೆಸ್ ಇನ್ಸೈಡರ್’ ಹೇಳಿದೆ.
ಹದ್ದು ಯುಎಇಯ ರಾಷ್ಟ್ರೀಯ ಪಕ್ಷಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ಹದ್ದುಗಳ ಸಾಗಾಟವು ಅಪರೂಪವೇನಲ್ಲ. ಅಲ್ಲಿ ವರ್ಷಗಳಿಂದ ಹಕ್ಕಿಗಳಿಗೆ ಬೇಟೆ ತರಬೇತಿ ನೀಡಲಾಗುತ್ತಿದೆ.
Next Story