ಸಿರಿಯದ ಐಸಿಸ್ ನೆಲೆಗಳ ಮೇಲೆ ಇರಾಕ್ ವಾಯು ದಾಳಿ
ಬಗ್ದಾದ್, ಫೆ. 25: ಇರಾಕ್ ವಾಯು ಪಡೆಯ ವಿಮಾನಗಳು ನೆರೆಯ ಸಿರಿಯದ ಒಳಗಿರುವ ಐಸಿಸ್ ಗುಂಪುಗಳ ಸದಸ್ಯರ ಮೇಲೆ ದಾಳಿ ನಡೆಸಿದವು ಎಂದು ಅಧಿಕಾರಿಗಳು ತಿಳಿಸಿದರು.
ದಾಳಿಗೊಳಗಾದ ಭಯೋತ್ಪಾದಕರು ಬಗ್ದಾದ್ನಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟಗಳಿಗೆ ಕಾರಣರಾಗಿದ್ದರು ಎನ್ನಲಾಗಿದೆ.
‘‘ಸಿರಿಯದ ನೆಲದಲ್ಲಿರುವ ಹುಸೈಬೇಹ್ ಮತ್ತು ಅಲ್ಬು ಕಮಲ್ನಲ್ಲಿರುವ ಐಸಿಸ್ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ಮಾಡುವಂತೆ ನಾವು ವಾಯುಪಡೆಗೆ ಆದೇಶ ನೀಡಿದ್ದೇವೆ’’ ಎಂದು ಇರಾಕ್ ಪ್ರಧಾನಿ ಹೈದರ್ ಅಲ್-ಅಬಾದಿ ಹೇಳಿಕೆಯೊಂದರಲ್ಲಿ ತಿಳಿಸಿದರು.
ಇದು ಸಿರಿಯದ ಭೂಭಾಗದಲ್ಲಿ ಇರಾಕಿ ಜೆಟ್ಗಳು ನಡೆಸಿರುವ ಪ್ರಥಮ ದಾಳಿಯೆಂದು ಭಾವಿಸಲಾಗಿದೆ.
Next Story