ಜರ್ಮನಿ: ರೈಲು ಅಪಘಾತ; 4 ಸಾವು
ಬರ್ಲಿನ್, ಫೆ. 9: ಜರ್ಮನಿಯ ದಕ್ಷಿಣದ ರಾಜ್ಯ ಬವರಿಯದಲ್ಲಿ ಮಂಗಳವಾರ ಎರಡು ರೈಲುಗಳು ಮುಖಾಮುಖಿ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಸುಮಾರು 150 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.
ಜರ್ಮನಿಯ ದಕ್ಷಿಣದ ಬಡ್ ಐಬ್ಲಿಂಗ್ ನಗರದ ಸಮೀಪ ಬೆಳಗ್ಗೆ 6:48ಕ್ಕೆ ಒಂದೇ ಹಳಿಯಲ್ಲಿ ಚಲಿಸುತ್ತಿದ್ದ ರೈಲುಗಳು ಢಿಕ್ಕಿಯಾದವು.
Next Story