ಕ್ಯಾಲಿಕಟ್ ನಲ್ಲಿ 30 ಲಕ್ಷ ರೂ. ಹಳೆ ನೋಟು ಪತ್ತೆ
ಕ್ಯಾಲಿಕಟ್, ಮಾ. 17: ಕಲ್ಲಿಕೋಟೆ ಕೊಡುವಳ್ಳಿಯ ಬಳಿ ಮೂವತ್ತು ಲಕ್ಷರೂಪಾಯಿಯ ಹಳೆ ನೋಟುಗಳು ಪತ್ತೆಯಾಗಿದೆ. ಹಳೆಯ 500,1000 ರೂಪಾಯಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ಘಟನೆಗೆ ಸಂಬಂಧಿಸಿ ಬೇಪೂರ್ನ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಣ ಎಲ್ಲಿಂದ ಬಂತು, ಅದರ ಮೂಲ ಎಲ್ಲಿ ಎಂದು ಆರೋಪಿಗಳಿಂದ ವಿವರ ಸಂಗ್ರಹಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ತಾಮರಶ್ಶೇರಿ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆಯಲ್ಲಿ ತೊಡಗಿತ್ತು.
Next Story