ಲಲಿತ್ ಮೋದಿಗೆ ಬಿಗ್ ರಿಲೀಫ್ ; ಗಡಿಪಾರು ಮನವಿಯನ್ನು ತಿರಸ್ಕರಿಸಿದ ಇಂಟರ್ಪೋಲ್
ಹೊಸದಿಲ್ಲಿ, ಮಾ.28: ಐಪಿಎಲ್ ನ ಮಾಜಿ ಆಯುಕ್ತ ಲಲಿತ್ ಮೋದಿ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಭಾರತ ಸಲ್ಲಿಸಿದ್ದ ಮನವಿಯನ್ನು ಇಂಟರ್ಪೋಲ್
ತಿರಸ್ಕರಿಸಿದೆ. ಇದರೊಂದಿಗೆ ಲಲಿತ್ ಮೋದಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ಭಾರತದ ಮನವಿಯಂತೆ ಗಡಿಪಾರು ಮಾಡುವ ಉದ್ದೇಶಕ್ಕಾಗಿ ಇಂಟರ್ಪೋಲ್ ಮೋದಿಯನ್ನು ಬಂಧಿಸುವ ಸಾಧ್ಯತೆ ದೂರವಾಗಿದೆ.
ಐಪಿಎಲ್ ನಲ್ಲಿ ಹಣ ದುರುಪಯೋಗ ಮತ್ತು ವಿದೇಶೀ ವಿನಿಮಯ ನಿರ್ವಹಣ ಕಾಯ್ದೆ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಲಲಿತ್ ಮೋದಿ ಪ್ರಸ್ತುತ ಲಂಡನ್ನಲ್ಲಿ ನೆಲೆಸಿದ್ದಾರೆ.
Next Story