ಭಾರತೀಯ ಕಂಪೆನಿಗಳಿಂದ ಎಚ್-1ಬಿ ವೀಸಾ ವ್ಯವಸ್ಥೆ ದುರುಪಯೋಗ
ಅಮೆರಿಕನ್ ಸಂಸದ ಆರೋಪ
ವಾಶಿಂಗ್ಟನ್, ಮಾ. 28: ದೊಡ್ಡ ಪ್ರಮಾಣದಲ್ಲಿ ಎಚ್-1ಬಿ ವೀಸಾಗಳನ್ನು ಪಡೆಯುವ ಭಾರತೀಯ ಕಂಪೆನಿಗಳು ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಅಮೆರಿಕದ ಪ್ರಭಾವಿ ಸಂಸದ ಡ್ಯಾರಲ್ ಇಸ್ಸ ಸೋಮವಾರ ಆರೋಪಿಸಿದ್ದಾರೆ.
ತಾನು ಕಾಂಗ್ರೆಸ್ನಲ್ಲಿ ಮಂಡಿಸಿರುವ ಮಸೂದೆಯು ಕಾಯಿದೆಯಲ್ಲಿರುವ ಈಗಿನ ಲೋಪದೋಷಗಳನ್ನು ಸರಿಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಎಚ್-1ಬಿ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸಬೇಕೆಂದು ಕರೆನೀಡುವ ಮಸೂದೆಯೊಂದನ್ನು ಅವರು ಇತ್ತೀಚೆಗೆ ಮಂಡಿಸಿದ್ದಾರೆ.
ತಾನು ಪ್ರಸ್ತಾಪಿಸಿದ ವಿಧಾನವು ಶ್ರೇಷ್ಠ ಪ್ರತಿಭೆಗಳನ್ನು ಅಮೆರಿಕಕ್ಕೆ ತರುತ್ತದೆ ಹಾಗೂ ಈಗಿನ ಎಚ್-1ಬಿ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ನೆರವಾಗುತ್ತದೆ ಎಂದು ಅವರು ಹೇಳುತ್ತಾರೆ.
‘‘ಅಧ್ಯಕ್ಷರು (ಡೊನಾಲ್ಡ್ ಟ್ರಂಪ್) ಮಸೂದೆಯನ್ನು ಬೆಂಬಲಿಸುತ್ತಾರೆ. ಸೆನೆಟ್ನಲ್ಲಿ ನಾವು ಉತ್ತಮ ಬೆಂಬಲವನ್ನು ಹೊಂದಿದ್ದೇವೆ ಎಂದು ನನಗನಿಸುತ್ತದೆ’’ ಎಂದು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಹೇಳಿದರು.
Next Story