ಲಾಹೋರ್ : ಬಾಂಬ್ ಸ್ಫೋಟದಿಂದ 6ಸಾವು
ಲಾಹೋರ್,ಎ.5:ಲಾಹೋರ್ ನ ಬೆಡಿಯನ್ ರಸ್ತೆಯಲ್ಲಿ ಬುಧವಾರ ನಡೆದ ಬಾಂಬ್ ಸ್ಫೋಟದಿಂದಾಗಿ 6 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
ಪಾಕಿಸ್ತಾನದ ಆರ್ಮಿ ವಾಹನದ ಪಕ್ಕದಲ್ಲಿ ಸ್ಫೋಟ ನಡೆದಿದ್ದು, ಆತ್ಮಾಹುತಿ ಬಾಂಬ್ ಸ್ಫೋಟ ನಡೆದಿರುವುದಾಗಿ ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.
ಸ್ಫೋಟ ಸಂಭವಿಸಿದ ತಕ್ಷಣ ಪಕ್ಕದ ವಾಹನವೊಂದಕ್ಕೆ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಕಂಬೈನ್ಡ್ ಮಿಲಿಟರಿ ಹಾಸ್ಪಿಟಲ್(ಸಿಎಂಎಚ್) ಮತ್ತು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
Next Story