ಕೊಲಂಬಿಯ ಭೂಕುಸಿತ: ಮೃತರು 314
ಬೊಗೊಟ (ಕೊಲಂಬಿಯ), ಎ. 8: ಕೊಲಂಬಿಯದ ದಕ್ಷಿಣದ ನಗರ ಮೊಕೊದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಬದುಕುಳಿದವರಿಗಾಗಿ ನಡೆಸುತ್ತಿರುವ ಶೋಧ ಕಾರ್ಯಾಚರಣೆಯನ್ನು ಅಧಿಕಾರಿಗಳು ಶನಿವಾರ ಅಧಿಕೃತವಾಗಿ ನಿಲ್ಲಿಸಿದ್ದಾರೆ. ಆದಾಗ್ಯೂ, 106 ಮಂದಿ ಈಗಲೂ ನಾಪತ್ತೆಯಾಗಿದ್ದಾರೆ.
ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 314ಕ್ಕೇರಿದೆ.
ಇನ್ನು ರಕ್ಷಣಾ ಕಾರ್ಯಕರ್ತರು ರಸ್ತೆಗಳು ಮತ್ತು ಕಟ್ಟಡಗಳನ್ನು ಅಗೆಯುವ, ನೆರವು ವಿತರಿಸುವ ಹಾಗೂ ಪಟ್ಟಣದಲ್ಲಿ ಸೋಂಕು ರೋಗಗಳು ಹರಡುವುದನ್ನು ನಿಯಂತ್ರಿಸುವ ಕಾರ್ಯದತ್ತ ಗಮನಹರಿಸಲಿದ್ದಾರೆ.
ಒಂದು ವಾರದ ಹಿಂದೆ ಮಣ್ಣು ಮತ್ತು ಕಲ್ಲುಗಳಿಂದ ತುಂಬಿದ ಪ್ರವಾಹದ ನೀರು ಪರ್ವತಗಳಿಂದ ಹರಿದು ಮನೆಗಳು ಮತ್ತು ಕಟ್ಟಡಗಳಿಗೆ ಅಪ್ಪಳಿಸಿತ್ತು.
Next Story