ಅಮೆರಿಕ, ಜಪಾನ್ ನೌಕೆಗಳ ಸಮರಾಭ್ಯಾಸ
ಟೋಕಿಯೊ, ಎ. 23: ಕೊರಿಯ ಪರ್ಯಾಯ ದ್ವೀಪಕ್ಕೆ ಆಗಮಿಸುತ್ತಿರುವ ಅಮೆರಿಕದ ಯುಎಸ್ ಕಾರ್ಲ್ ವಿನ್ಸನ್ ವಿಮಾನವಾಹಕ ನೌಕೆಯ ಜೊತೆಗೆ ಜಪಾನ್ನ ಎರಡು ನೌಕೆಗಳು ರವಿವಾರ ಯುದ್ಧಾಭ್ಯಾಸ ನಡೆಸಿದವು ಎಂದು ಜಪಾನ್ ನೌಕಾಪಡೆ ತಿಳಿಸಿದೆ.
ಜಪಾನ್ನ ಯುದ್ಧ ನೌಕೆಗಳಾದ ಸಮಿಡರೆ ಮತ್ತು ಅಶಿಗರ ಶುಕ್ರವಾರ ಪಶ್ಚಿಮ ಜಪಾನ್ನಿಂದ ಹೊರಟಿದ್ದವು.ಜಪಾನ್ ನೌಕೆಗಳು ಅಮೆರಿಕದ ಯುದ್ಧ ನೌಕೆಗಳೊಂದಿಗೆ ವಿವಿಧ ರೀತಿಯ ಯುದ್ಧ ಕಸರತ್ತುಗಳಲ್ಲಿ ಭಾಗವಹಿಸಲಿದೆ ಎಂದು ಜಪಾನ್ ನೌಕಾಪಡೆಯ ಹೇಳಿಕೆಯೊಂದು ತಿಳಿಸಿದೆ.
Next Story