ಸಿರಿಯ ಶಿಬಿರದ ಮೇಲೆ ಇಸ್ರೇಲ್ ದಾಳಿ: 3 ಸಾವು
ಡಮಾಸ್ಕಸ್ (ಸಿರಿಯ), ಎ. 23: ಗೋಲನ್ ಹೈಟ್ಸ್ ಸಮೀಪದಲ್ಲಿರುವ ಸಿರಿಯದ ಶಿಬಿರವೊಂದರ ಮೇಲೆ ಇಸ್ರೇಲ್ ರವಿವಾರ ನಡೆಸಿದ ದಾಳಿಯಲ್ಲಿ, ಮೂವರು ಸಿರಿಯ ಪರ ಹೋರಾಟಗಾರರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಸಿರಿಯದ ಕುನೈಟ್ರ ಸಮೀಪದ ಅಲ್-ಫವ್ವರ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಹೋರಾಟಗಾರರು ಗಾಯಗೊಂಡಿದ್ದಾರೆ ಎಂದರು.ಗೋಲನ್ ಹೈಟ್ಸ್ನ ಉತ್ತರದ ಭಾಗದ ಮೇಲೆ ನಡೆದ ಮೋರ್ಟರ್ ದಾಳಿಗೆ ಪ್ರತೀಕಾರವಾಗಿ ಸಿರಿಯದ ಒಳಗಿನ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಶುಕ್ರವಾರ ತಿಳಿಸಿದೆ.
Next Story