ಮೆಕ್ಸಿಕೊ ಗೋಡೆ ಬಗ್ಗೆ ಟ್ರಂಪ್ ನಿಲುವು ಸಡಿಲ
ವಾಶಿಂಗ್ಟನ್, ಎ. 26: ಅಮೆರಿಕ ಸರಕಾರ ದಿವಾಳಿಯಾಗುವುದನ್ನು ತಪ್ಪಿಸುವುದಕ್ಕಾಗಿ, ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಿಸುವ ತನ್ನ ನೆಚ್ಚಿನ ಯೋಜನೆಯ ಬಗ್ಗೆ ಮೃದು ಧೋರಣೆ ತಳೆದಿರುವ ಸೂಚನೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ.
ಆದರೆ, ತನ್ನ ಪ್ರಮುಖ ಚುನಾವಣಾ ಭರವಸೆಯಿಂದ ಹಿಂದೆ ಸರಿದಿದ್ದೇನೆ ಎಂಬ ಅಭಿಪ್ರಾಯಗಳನ್ನು ಅವರು ತಳ್ಳಿಹಾಕಿದ್ದಾರೆ. ‘‘ಗೋಡೆ ಕುರಿತ ನನ್ನ ನಿರ್ಧಾರವನ್ನು ನಾನು ಬದಲಾಯಿಸಿದ್ದೇನೆ ಎಂಬುದಾಗಿ ನಕಲಿ ಮಾಧ್ಯಮಗಳು ಹೇಳಿದರೆ ಕಿವಿಗೊಡಬೇಡಿ’’ ಎಂದು ಮಂಗಳವಾರ ಅವರು ಟ್ವೀಟ್ ಮಾಡಿದ್ದಾರೆ.
Next Story