ಪ್ರಿಯತಮೆಯನ್ನು ಕೊಂದ ಭಾರತ ಮೂಲದ ಸೈನಿಕನಿಗೆ ಜೀವಾವಧಿ ಶಿಕ್ಷೆ
ಲಂಡನ್, ಎ. 27: ಕಳೆದ ವರ್ಷ ತನ್ನ ಮಾಜಿ ಪ್ರಿಯತಮೆಯನ್ನು ಕೊಲೆಗೈದಿದ್ದ ಭಾರತ ಮೂಲದ ಬ್ರಿಟಿಶ್ ಸೈನಿಕನೋರ್ವನಿಗೆ ನ್ಯಾಯಾಲಯವೊಂದು ಬುಧವಾರ ಕನಿಷ್ಠ 22 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಲ್ಯಾನ್ಸ್ ಕಾರ್ಪೊರಲ್ 26 ವರ್ಷದ ತ್ರಿಮಾನ್ ‘ಹ್ಯಾರಿ’ ದಿಲ್ಲೋನ್ ಆಲಿಸ್ ರಗಲ್ರ ಫ್ಲಾಟ್ಗೆ ನುಗ್ಗಿ ಆಕೆಯ ಗಂಟಲನ್ನು ಒಂದು ಕಿವಿಯಿಂದ ಇನ್ನೊಂದು ಕಿವಿಯವರೆಗೆ ಸೀಳಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ಆತ ತನ್ನ ಮಾಜಿ ಪ್ರಿಯತಮೆಯ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದ್ದ ಹಾಗೂ ಆಕೆಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದ ಎನ್ನಲಾಗಿದೆ.
ಕನಿಷ್ಠ 22 ವರ್ಷ ಶಿಕ್ಷೆ ಅನುಭವಿಸಿದ ಬಳಿಕವಷ್ಟೇ ಆತನನ್ನು ಪರೋಲ್ಗೆ ಪರಿಗಣಿಸಬಹುದಾಗಿದೆ ಎಂದು ನ್ಯೂಕ್ಯಾಸಲ್ ಕ್ರೌನ್ ನ್ಯಾಯಾಲಯ ಹೇಳಿತು.
Next Story