ಡಮಾಸ್ಕಸ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ
ಡಮಾಸ್ಕಸ್, ಎ. 27: ಸಿರಿಯದ ರಾಜಧಾನಿ ಡಮಾಸ್ಕಸ್ ಸಮೀಪದ ಸೇನಾ ನೆಲೆಯೊಂದರ ಮೇಲೆ ಇಸ್ರೇಲ್ನ ಕ್ಷಿಪಣಿಗಳು ಗುರುವಾರ ದಾಳಿ ನಡೆಸಿವೆ ಎಂದು ಸಿರಿಯದ ಸರಕಾರಿ ಸುದ್ದಿ ಸಂಸ್ಥೆ ಸನಾ ವರದಿ ಮಾಡಿದೆ.
‘‘ಡಮಾಸ್ಕಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಸೇನಾ ನೆಲೆಯೊಂದರ ಮೇಲೆ ಇಸ್ರೇಲ್ ಗುರುವಾರ ಮುಂಜಾನೆ ಹಲವಾರು ಕ್ಷಿಪಣಿಗಳನ್ನು ಹಾರಿಸಿತು. ಆಗ ಭಾರೀ ಸ್ಫೋಟ ಸಂಭವಿಸಿತು’’ ಎಂದು ಸೇನಾ ಮೂಲವೊಂದನ್ನು ಉಲ್ಲೇಖಿಸಿ ಸನಾ ವರದಿ ಮಾಡಿದೆ.
Next Story