ಸಿರಿಯ: 8 ‘ವೈಟ್ ಹೆಲ್ಮೆಟ್’ ಕಾರ್ಯಕರ್ತರು ಬಲಿ
ಬೆರೂತ್, ಎ. 30: ಸಿರಿಯದ ಮಧ್ಯ ಭಾಗದಲ್ಲಿರುವ ಬಂಡುಕೋರ ನಿಯಂತ್ರಣದ ಪ್ರದೇಶದಲ್ಲಿ ‘ವೈಟ್ ಹೆಲ್ಮೆಟ್’ ಕಾರ್ಯಕರ್ತರಿದ್ದ ಕಟ್ಟಡದ ಮೇಲೆ ನಡೆದ ವಾಯುದಾಳಿಯೊಂದರಲ್ಲಿ ಎಂಟು ಮಂದಿ ಕಾರ್ಯಕರ್ತರು ಹತರಾಗಿದ್ದಾರೆ ಎಂದು ಪ್ರತಿಪಕ್ಷ ಕಾರ್ಯಕರ್ತರು ಶನಿವಾರ ಹೇಳಿದ್ದಾರೆ.
‘ವೈಟ್ ಹೆಲ್ಮೆಟ್’ ಕಾರ್ಯಕರ್ತರು ಬಂಡುಕೋರ ಪ್ರಾಬಲ್ಯದ ಸ್ಥಳಗಳಲ್ಲಿ ರಕ್ಷಣಾ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ವೈಟ್ ಹೆಲ್ಮೆಟ್ ಕಾರ್ಯಕರ್ತರು ಜಗತ್ತಿನ ಗಮನ ಸೆಳೆದಿದ್ದಾರೆ. ಬಂಡುಕೋರ ನಿಯಂತ್ರಣದ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ವೈಟ್ ಹೆಲ್ಮೆಟ್ ಕಾರ್ಯಕರ್ತರ ಮೇಲೆ ಈವರೆಗೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ ಎನ್ನಲಾಗಿದೆ.
Next Story