ಫಿಲಿಪ್ಪೀನ್ಸ್: ದ್ವೀಪದಲ್ಲಿ ಸೇನಾಡಳಿತ ಘೋಷಣೆ
ಮನಿಲಾ (ಫಿಲಿಪ್ಪೀನ್ಸ್), ಮೇ 24: ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ದೇಶದ ದಕ್ಷಿಣದ ದ್ವೀಪ ಮಿಂಡನಾವೊದಲ್ಲಿ ಮಂಗಳವಾರ ಸೇನಾಡಳಿತ ಘೋಷಿಸಿದ್ದಾರೆ. ಐಸಿಸ್ನೊಂದಿಗೆ ನಂಟು ಹೊಂದಿದ ಭಯೋತ್ಪಾದಕರು ಮತ್ತು ಸೇನೆಯ ನಡುವೆ ಮರವಿ ನಗರದಲ್ಲಿ ಭೀಕರ ಕಾಳಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.
ಕಾಳಗದಲ್ಲಿ ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಹಾಗೂ 12 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಕಾರ್ಯದರ್ಶಿ ಡೆಲ್ಫಿನ್ ಲೊರೆಂಝಾನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 15 ಬಂಡುಕೋರರು ತಂಗಿದ್ದ ಫ್ಲಾಟ್ ಒಂದರ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿದ ಬಳಿಕ ಸಂಘರ್ಷ ತಲೆದೋರಿದೆ.
Next Story