ಈಜಿಪ್ಟ್: ಕಾಪ್ಟಿಕ್ ಕ್ರೈಸ್ತರ ಮೇಲೆ ಬಂದೂಕುಧಾರಿಗಳಿಂದ ದಾಳಿ 26 ಸಾವು ,26 ಮಂದಿಗೆ ಗಾಯ
ಕೈರೋ (ಈಜಿಪ್ಟ್), ಮೇ 26: ದಕ್ಷಿಣ ಈಜಿಪ್ಟ್ನ ಮಿನ್ಯ ಪ್ರಾಂತದಲ್ಲಿ ಮುಸುಕುಧಾರಿ ಬಂದೂಕುಧಾರಿಗಳು ಶುಕ್ರವಾರ ಕಾಪ್ಟಿಕ್ ಕೈಸ್ತರ ಗುಂಪೊಂದರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಕೊಂದಿದ್ದಾರೆ ಹಾಗೂ 26 ಮಂದಿಯನ್ನು ಗಾಯಗೊಳಿಸಿದ್ದಾರೆ.
ಸಂತ್ರಸ್ತರು ಎರಡು ಬಸ್ಗಳು ಮತ್ತು ಒಂದು ಸಣ್ಣ ಟ್ರಕ್ನಲ್ಲಿ ಮೊನಾಸ್ಟರಿಯೊಂದಕ್ಕೆ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಾಂತದ ಪಶ್ಚಿಮ ಭಾಗದಲ್ಲಿ ‘ಸೇಂಟ್ ಸಾಮುಯೆಲ್ ದ ಕನ್ಫೆಸರ್’ ಮೊನಾಸ್ಟರಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದಾಗ ಅವರ ಮೇಲೆ ದಾಳಿ ನಡೆಸಲಾಯಿತು.
ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿದ ದುಷ್ಕರ್ಮಿಗಳು ಅದರಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಈಜಿಪ್ಟ್ನ ಸುಮಾರು 9.2 ಕೋಟಿ ಜನಸಂಖ್ಯೆಯಲ್ಲಿ ಕಾಪ್ಟಿಕ್ ಕ್ರೈಸ್ತರು 10 ಶೇಕಡದಷ್ಟಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಅವರನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಲಾಗುತ್ತಿದೆ.
Next Story