ಫ್ರಾನ್ಸ್ ಅಧ್ಯಕ್ಷ-ಮೋದಿ ಭೇಟಿ
ಭಯೋತ್ಪಾದನೆ ನಿಗ್ರಹ, ಹವಾಮಾನ ಬದಲಾವಣೆ ಮಾತುಕತೆ
ಪ್ಯಾರಿಸ್, ಜೂ. 3: ಪ್ರಧಾನಿ ನರೇಂದ್ರ ಮೋದಿ ಶನಿವಾರ ಫ್ರಾನ್ಸ್ನ ನೂತನ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಉಭಯ ನಾಯಕರು ಬಾಂಧವ್ಯ ವೃದ್ಧಿ, ಭಯೋತ್ಪಾದನೆ ನಿಗ್ರಹ ಮತ್ತು ಹವಾಮಾನ ಬದಲಾವಣೆ ಮುಂತಾದ ಜಾಗತಿಕ ಹಾಗೂ ದ್ವಿಪಕ್ಷೀಯ ಆಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಿದರು.
ಫ್ರಾನ್ಸ್ ಅಧ್ಯಕ್ಷರ ಅಧಿಕೃತ ನಿವಾಸ ‘ಎಲೈಸೀ ಪ್ಯಾಲೇಸ್’ನಲ್ಲಿ ಉಭಯ ನಾಯಕರ ಭೇಟಿ ನಡೆಯಿತು.
ರಶ್ಯ ಭೇಟಿಯ ಬಳಿಕ ಮೋದಿ ಶನಿವಾರ ಫ್ರಾನ್ಸ್ಗೆ ಆಗಮಿಸಿದರು.
ಮೋದಿ-ಮ್ಯಾಕ್ರೋನ್ ಮಾತುಕತೆಯ ಬಳಿಕ ಉಭಯ ದೇಶಗಳು ಜಂಟಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿವೆ.
Next Story