ಚೀನಾ ಜೊತೆಗಿನ ಭಾಗೀದಾರಿಕೆ ಬಲಗೊಳಿಸಲು ಸಿದ್ಧ: ವಿ.ಕೆ. ಸಿಂಗ್
ಬೀಜಿಂಗ್, ಜೂ. 18: ಚೀನಾದೊಂದಿಗಿನ ತನ್ನ ವ್ಯೆಹಾತ್ಮಕ ಭಾಗೀದಾರಿಕೆಯನ್ನು ಬಲಗೊಳಿಸಲು ಭಾರತ ಸಿದ್ಧವಾಗಿದೆ ಎಂದು ವಿದೇಶ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ. ಸಿಂಗ್ ರವಿವಾರ ತಿಳಿಸಿದರು.
ಇಲ್ಲಿ ನಡೆಯಲಿರುವ ಪ್ರಥಮ ‘ಬ್ರಿಕ್ಸ್’ (ಬ್ರೆಝಿಲ್, ರಶ್ಯ, ಭಾರತ, ಚೀನಾ, ದಕ್ಷಿಣ ಆಫ್ರಿಕ) ವಿದೇಶ ಸಚಿವರ ಸಮ್ಮೇಳನದ ಮುನ್ನಾ ದಿನದಂದು ಚೀನಾದ ವಿದೇಶ ಸಚಿವ ವಾಂಗ್ ಯಿ ಜೊತೆ ನಡೆದ ದ್ವಿಪಕ್ಷೀಯ ಮಾತುಕತೆಯ ವೇಳೆ ಅವರು ಈ ಮಾತುಗಳನ್ನಾಡಿದರು.
‘‘ನನಗೆ ಇಲ್ಲಿರಲು ಹಾಗೂ ನಾವು ನಮ್ಮ ಸಂಬಂಧವನ್ನು ಹೇಗೆ ಮುಂದಕ್ಕೆ ಒಯ್ಯಬಹುದು ಎಂಬ ವಿಷಯದಲ್ಲಿ ಇನ್ನೂ ಹೆಚ್ಚಿನ ಮಾತುಕತೆಗಳನ್ನು ನಡೆಸಲು ಸಂತೋಷವಾಗುತ್ತಿದೆ. ಚೀನಾದೊಂದಿಗಿನ ವ್ಯೆಹಾತ್ಮಕ ಭಾಗೀದಾರಿಕೆ ಮತ್ತು ದ್ವಿಪಕ್ಷೀಯ ಮಾತುಕತೆಯನ್ನು ಬಲಗೊಳಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ’’ ಎಂದು ಸಿಂಗ್ ನುಡಿದರು.
Next Story