ಚೀನಾ ವಿಮಾನದಲ್ಲಿ ತಾಂತ್ರಿಕ ವೈಫಲ್ಯ: 20 ಮಂದಿಗೆ ಗಾಯ
ಬೀಜಿಂಗ್, ಜೂ. 18: ಪ್ಯಾರಿಸ್ನಿಂದ ಚೀನಾಗೆ ಹಾರುತ್ತಿದ್ದ ಚೀನಾ ಈಸ್ಟರ್ನ್ ಏರ್ಲೈನ್ಸ್ ವಿಮಾನವೊಂದು ರವಿವಾರ ನೈರುತ್ಯ ಚೀನಾದಲ್ಲಿ ಹಾರುತ್ತಿದ್ದಾಗ ತಾಂತ್ರಿಕ ಸಮಸ್ಯೆ ಎದುರಿಸಿದ್ದು, ಇದರಿಂದ ಉಂಟಾದ ಆಘಾತದಿಂದ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ ಎಂದು ಚೀನಾದ ಅಧಿಕೃತ ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಎಂಯು744 ವಿಮಾನವು ಯುನಾನ್ ಪ್ರಾಂತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೊಂದರಲ್ಲಿ ಭೂಸ್ಪರ್ಶ ಮಾಡಲು ಇಳಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ವಿಮಾನ ಜೋರಾಗಿ ಕಂಪಿಸುತ್ತಿದ್ದಾಗ ಮೇಲಿನಿಂದ ಚೀಲಗಳು ಬಿದ್ದು ಹಾಗೂ ತಲೆ ಮೇಲಿನ ಹಲಗೆಗಳಿಗೆ ಢಿಕ್ಕಿಯಾಗಿ ಹಲವರು ಮೂಳೆ ಮುರಿತಕ್ಕೊಳಗಾಗಿದ್ದಾರೆ ಹಾಗೂ ಹಲವರ ತಲೆಗೆ ಗಂಭೀರ ಗಾಯಗಳಾಗಿವೆ.
Next Story